ತೇಜಸ್ವಿ ನೆನಪು: ತೇಜಸ್ವಿಯವರು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪೂರ್ಣಚಂದ್ರನಂತೆ ಬೆಳಗಿದರು. ನವೋದಯ ಕಾಲದ ಸಾಹಿತಿಗಳಲ್ಲಿ ತಮ್ಮದೇ ಆದ ಹೊಸ ತರದ ಬರವಣಿಗೆಗೆ ಹೆಸರಾಗಿದ್ದರು. ಇವರ ಸಾಹಿತ್ಯ ಹಲವರಿಗೆ ಚಂದ್ರನ ಬೆಳಕಂತೆ ತಂಪು ನೀಡಿದರೆ, ಕೆಲವರಿಗೆ ತೇಜಸ್ಸಿನ ಪ್ರಕರ ಬಿಸಿಲಾಯಿತು. ಸ್ವತಃ ಬರಹಗಾರ, ಕೃಷಿಕ, ಪರಿಸರ ಪ್ರೇಮಿ, ಸಂಶೋಧಕ, ತಂತ್ರಜ್ಞ, ಫೋಟೋಗ್ರಾಫರ್. . . ಇತ್ಯಾದಿ ಆಗಿದ್ದ ತೇಜಸ್ವಿ, ಎಲ್ಲಕ್ಕಿಂತ ಮಿಗಿಲಾಗಿ ಶ್ರೇಷ್ಠ ಮಾನವತವಾದಿ ಆಗಿದ್ದರು. ಇವರ ಕೃತಿಗಳಲ್ಲಿ ಪರಿಸರ ಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳು ಎದ್ದು ಕಾಣುತ್ತವೆ. ಇಂತಹ ತೇಜಸ್ವಿ ಚಿಕ್ಕಮಗಳೂರಿನ ಮೂಡಿಗೆರೆಯ ತಮ್ಮ ಮನೆ ನಿರುತ್ತರದಿಂದ ಬಾರದ ಲೋಕಕ್ಕೆ ಏಪ್ರಿಲ್ ೦೫, ೨೦೦೭ರಂದು ನಿರ್ಗಮಿಸಿದ್ದು ದುರದೃಷ್ಟವೇ ಸರಿ.
ಇವರು ತಮ್ಮ ಮಲೆನಾಡು ಜೀವನದ ಅನುಭವದಿಂದ ಬರೆದ ಕೃತಿಗಳು 'ಪರಿಸರದ ಕಥೆ' ಮತ್ತು 'ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು'. ಮುಂದೆ ಓದಿ.... http://tejaswivismaya.com/home
ಐದು ಲಕ್ಷ ವೀಕ್ಷಣೆಗಳು @spn3187
-
ನಮ್ಮ ಕನ್ನಡ ನಾಡು ತಾಣಕ್ಕೆ ಐದು ಲಕ್ಷ ವೀಕ್ಷಣೆಗಳು ಪೂರ್ಣಗೊಂಡಿವೆ
ನಮ್ಮ ಕನ್ನಡ ನಾಡಿದ ಜನತೆಗಾಗಿ ಕನ್ನಡದ ತಾಣಗಳು ಸಿಗುವುದು ಬಹಳ ವಿರಳ. ನಮ್ಮ ಕನ್ನಡ ನಾಡು
ಒಂದು ವೆಬ್-ತಾಣ ಬನ್ನಿ "ನ...
11 hours ago